ನಿಮಗೆ ಅನಿಸಿರಬಹುದು ಈ ಗಡ್ಡಕ್ಕೂ ಮತ್ತ ಉಳ್ಳಾಗಡ್ಡಿಗೂ ಏನ್ರಿ ಸಂಬಂಧ ಅಂತ.? ಇದು ಇಮಾಮ ಸಾಬೀಗೂ ಮತ್ತ ಗೋಕಲಾಷ್ಟಮಿಗೂ ಏನ್ರಿ ಸಂಬಂಧ ಅಂದಂಗ ಅತ ಬಿಡ್ರಿ ಅಂದಕೊಬ್ಯಾಡ್ರಿ ಇಲ್ಲೆ, ಗಡ್ಡಕ್ಕೂ ಮತ್ತ. ಉಳ್ಳಾಗಡ್ಡಿ ಗೂ ಸಂಬಂಧ ಅದ, ಅದೇನಂದ್ರ ಕೆಲ ಧಮ೯ದವರು ಮತ್ತ ಬ್ರಾಮ್ಹಣರು ನೇಮ-ನಿತ್ಯ, ಜಪಾ-ತಪಾ ಪೂಜಿ-ಪುನಸ್ಕಾರ ಉಪವಾಸ-ವನವಾಸ ಅಂತ ಅಚರಣೆ ಮಾಡೋರು ತಮ್ಮ ವ್ರತ ಆಚರಣೆ ಕಾಲದೊಳಗೆ ಉಳ್ಳಾಗಡ್ಡಿ ತಿನ್ನೊದಿಲ್ಲಾ ಅವಾಗ ದಾಡಿ ಮಾಡಿಕೊಳ್ಳೋದರ ಬಗ್ಗೆ ಅಸಕ್ತಿ ವಹಿಸಿರೋದಿಲ್ಲಾ ಹಿಂಗಾಗಿ ಆವಾಗ ಸುಮಾರು ಜನ ಗಡ್ಡಾ ಬಿಟ್ಟಿರತಾರ ಅಷ್ಟ ಈ ಅಧಾರದಮ್ಯಾಲೆ ಗಡ್ಡಕ್ಕೂ ಉಳ್ಳಾಗಡ್ಡಿಗೂ ಸಂಬಂಧ ಅದ ಅಂತ ಹೇಳೋದು.ಅಂವಾ ಗಡ್ಡಾ ಬಿಟ್ಟಾನ ಅಷ್ಟ...... ಉಳ್ಳಾಗಡ್ಡಿ ಬಿಟ್ಟಿಲ್ಲಾ ಗಡ್ಡಾ ಬಿಟ್ಟಾನ ಅಂದ್ರ ಎಲ್ಲಾನೂ ಬಿಟ್ಟಾನ ಅಂತ ಅಲ್ಲಾ ಸಾಧು-ಸಂತರು, ಕೆಲವೊಂದು ದಮ೯,ಜನಾಂಗ ವ್ರತನಿಯಮಗಳನ್ನು ಹಿಡಿದವರು, ಬುದ್ಧಿಜೀವಿಗಳು, ವಿಜ್ಞಾನಿಗಳು, ಗಡ್ಡಾಮಾಡಿಕೋಳ್ಳಲಿಕ್ಕೆ ಟ್ಯಮು ಇಲ್ಲದವರು, ನಿಗ೯ತಿಕರು,ಇತ್ಯಾದಿ ಇತ್ಯಾದಿ ಅಲ್ಲದನ ಇಲ್ಲೆ ಒಂದ ಮಜಾ ಕೇಳ್ರಿಲ್ಲೆ ಗಡ್ಡಾ ಬಿಟ್ಟಿರೋ ನನ್ನ ದೋಸ್ತನ್ನ ಒಬ್ಬನ್ನ ಸುಮ್ನ ಕೇಳದೆ ಯಾಕೋ ದೋಸ್ತ ಗಡ್ಡಾಬಿಟ್ಟಿಯಲ್ಲೋ ಅಂತ ಅದಕ ಅಂವಾ ನಾ ಬಿಟ್ಟಿಲ್ಲೋ ಮಾರಾಯಾ ತಾವ ಬಂದಾವ ಅನಬೇಕ!? ಇಂಥಾ ಎಲ್ಲಾ ಜನಾನೂ ಗಡ್ಡಾಬಿಟ್ಟವರ ಪೈಕೀನ ಬರತಾರ. ಹಂಗಂತ ಹೇಳಿ ಅವರು ಎಲ್ಲಾನೂ ಬಿಟ್ಟವರು, ಅಂದ್ರ ಸವ೯ಸಂಗ ಪರಿತ್ಯಾಗಿಗಳು...
Comments