ಅಂವಾ ಗಡ್ಡಾ ಬಿಟ್ಟಾನ ಅಷ್ಟ...... ಉಳ್ಳಾಗಡ್ಡಿ ಬಿಟ್ಟಿಲ್ಲಾ



  ನಿಮಗೆ ಅನಿಸಿರಬಹುದು ಈ ಗಡ್ಡಕ್ಕೂ ಮತ್ತ ಉಳ್ಳಾಗಡ್ಡಿಗೂ ಏನ್ರಿ ಸಂಬಂಧ ಅಂತ.? ಇದು ಇಮಾಮ ಸಾಬೀಗೂ ಮತ್ತ ಗೋಕಲಾಷ್ಟಮಿಗೂ ಏನ್ರಿ ಸಂಬಂಧ ಅಂದಂಗ ಅತ ಬಿಡ್ರಿ ಅಂದಕೊಬ್ಯಾಡ್ರಿ ಇಲ್ಲೆ, ಗಡ್ಡಕ್ಕೂ ಮತ್ತ. ಉಳ್ಳಾಗಡ್ಡಿ ಗೂ ಸಂಬಂಧ ಅದ, ಅದೇನಂದ್ರ ಕೆಲ ಧಮ೯ದವರು ಮತ್ತ ಬ್ರಾಮ್ಹಣರು ನೇಮ-ನಿತ್ಯ,
ಜಪಾ-ತಪಾ ಪೂಜಿ-ಪುನಸ್ಕಾರ ಉಪವಾಸ-ವನವಾಸ ಅಂತ ಅಚರಣೆ ಮಾಡೋರು ತಮ್ಮ ವ್ರತ ಆಚರಣೆ ಕಾಲದೊಳಗೆ ಉಳ್ಳಾಗಡ್ಡಿ ತಿನ್ನೊದಿಲ್ಲಾ ಅವಾಗ ದಾಡಿ ಮಾಡಿಕೊಳ್ಳೋದರ ಬಗ್ಗೆ ಅಸಕ್ತಿ ವಹಿಸಿರೋದಿಲ್ಲಾ ಹಿಂಗಾಗಿ ಆವಾಗ ಸುಮಾರು ಜನ ಗಡ್ಡಾ ಬಿಟ್ಟಿರತಾರ ಅಷ್ಟ ಈ ಅಧಾರದಮ್ಯಾಲೆ ಗಡ್ಡಕ್ಕೂ ಉಳ್ಳಾಗಡ್ಡಿಗೂ ಸಂಬಂಧ ಅದ ಅಂತ ಹೇಳೋದು.ಅಂವಾ ಗಡ್ಡಾ ಬಿಟ್ಟಾನ ಅಷ್ಟ...... ಉಳ್ಳಾಗಡ್ಡಿ ಬಿಟ್ಟಿಲ್ಲಾ
ಗಡ್ಡಾ ಬಿಟ್ಟಾನ ಅಂದ್ರ ಎಲ್ಲಾನೂ ಬಿಟ್ಟಾನ ಅಂತ ಅಲ್ಲಾ
ಸಾಧು-ಸಂತರು, ಕೆಲವೊಂದು ದಮ೯,ಜನಾಂಗ ವ್ರತನಿಯಮಗಳನ್ನು ಹಿಡಿದವರು, ಬುದ್ಧಿಜೀವಿಗಳು, ವಿಜ್ಞಾನಿಗಳು, ಗಡ್ಡಾಮಾಡಿಕೋಳ್ಳಲಿಕ್ಕೆ ಟ್ಯಮು ಇಲ್ಲದವರು, ನಿಗ೯ತಿಕರು,ಇತ್ಯಾದಿ ಇತ್ಯಾದಿ ಅಲ್ಲದನ ಇಲ್ಲೆ ಒಂದ ಮಜಾ ಕೇಳ್ರಿಲ್ಲೆ ಗಡ್ಡಾ ಬಿಟ್ಟಿರೋ ನನ್ನ ದೋಸ್ತನ್ನ ಒಬ್ಬನ್ನ ಸುಮ್ನ ಕೇಳದೆ ಯಾಕೋ ದೋಸ್ತ ಗಡ್ಡಾಬಿಟ್ಟಿಯಲ್ಲೋ ಅಂತ ಅದಕ ಅಂವಾ ನಾ ಬಿಟ್ಟಿಲ್ಲೋ ಮಾರಾಯಾ ತಾವ ಬಂದಾವ ಅನಬೇಕ!? ಇಂಥಾ ಎಲ್ಲಾ ಜನಾನೂ ಗಡ್ಡಾಬಿಟ್ಟವರ ಪೈಕೀನ ಬರತಾರ.
ಹಂಗಂತ ಹೇಳಿ ಅವರು ಎಲ್ಲಾನೂ ಬಿಟ್ಟವರು, ಅಂದ್ರ ಸವ೯ಸಂಗ ಪರಿತ್ಯಾಗಿಗಳು ಅಂತ ಅಥ೯ ಅಲ್ಲಾ. ಅಲ್ಲದನ ಗಡ್ಡಾ ತಗದವ್ರು ಏನೂ ಬಿಟ್ಟಿಲ್ಲಾ ಅಂತೂನೂ ಅಥ೯ ಅಲ್ಲಾ. ಒಬ್ಬ ಮನುಷ್ಯ ನಡಕೊಳ್ಳೋ ರೀತಿ,ನೀತಿ,ನಡುವಳಿಕಿ ಮ್ಯಾಲ ಅವನ ವ್ಯಕ್ತಿತ್ವ ಹಿಂಗ ಅದ ಅಂತ ಹೇಲಬಹುದ,
ವಿನಃ ಗಡ್ಡಾ ಬಿಟ್ಟಾನೋ ಇಲ್ಲೋ ಅನ್ನೋದರಮ್ಯಾಲಲ್ಲಾ .
ಒಟ್ಟಿನಮ್ಯಾಲ ಗಡ್ಡದ ವಿಷಯ ಅಂದ್ರ ದೊಡ್ಡ ಕಥೀನ ಅದ.
                          ಒಮ್ಮೆ ಧಾರವಾಡಾಗ ನಮ್ಮ ಹುಚ್ಚಣ್ಣಮಾಮಾ ಅವರ ಮನಿಗೆ ಹೋಗಿದ್ದೆ ಈಗ 85 ರ ಹರೆಯದ ಅವರು ಅಲ್ಲೆ S D O T ಅಂತ ಕೆಲಸಾ ಮಾಡ್ತಿದ್ರು ಅವರ ಹೆಸರು ಅಷ್ಟ ಹಂಗ ಆದರ ಅವರು ಭಾರಿ ಶ್ಯಾಣ್ಯಾರು ಸಾಹಸಿಗರು ಭಾರತದ ದೂರವಾಣಿ ಇಲಾಖೆಯೊಳಗ ಅಗದೀ ಕನಿಷ್ಟ ಹುದ್ದೆಯೋಳಗ ಸೇರಿ ಅಗದೀ ದೊಡ್ಡ ಹುದ್ದೆ ಪಡಕೊಂಡು ರಿಟಾಯರ ಅಗಿ ತಮ್ಮ ವಿಶ್ರಾಂತಿ ಜೀವನದೊಳಗ ಮೊದಲ 12 ವಷ೯ ವರದಹಳ್ಳಿ ಶ್ರೀ ಶ್ರೀಧರ ಆಶ್ರಮದಲ್ಲಿ ಸಾಧನಾ ಮಾಡಿ ಸಂತರಂರತಾಗಿ ಮುಂಬಯಿಯಾಗ ಮಗನ ಮನಿಯೊಳಗ ಏಕಾಂತದಲ್ಲಿ ವಾಸಿಸುತ್ತಿದ್ದಾರೆ.ಅತ್ಯಂತ ಮೇಧಾವಿಗಳು, ಸಜ್ಜನರು, ಹಾಸ್ಯಪ್ರಜ್ಯೆಯನ್ನು ಹೊಂದಿರುವ ಈ ತತ್ಪಜ್ಯಾನಿ 70 ರ ದಶಕದೊಳಗ ಧಾರವಾಡದಾಗ ಅವರ ಮನಿಗೆ ಹೋದಾಗ ಮನಿ ಹತ್ರನ ಇರೊ ಅವರ ಗೆಳೆಯ ಅವರ ಮನಿಗೆ ಬಂದಿದ್ರು ಗಡ್ಡಬಿಟ್ಟದ್ದ.ಅವರು ಬಿಳಿಲುಂಗಿ, ಮ್ಯಾಲ ಮಳಿ ಅದ ಅಂತ ಹೇಳಿ ಒಂದ ಸಣ್ಣ ಧೋತರ ಹೊತಗೊಂಡು ಬಂದಿದ್ರು ಅವರ ಗುತು೯ ಪರಿಚಯ ಮಾಮಿಗೆ ಇರ್ಲಿಲ್ಲೊ ಏನೋ ಏನಾದರೂ ತಿಂಡಿ ಚಹಾ ಮಾಡಿದರಾತು ಅಂತೋ ಏನೋ ಮಾಮಾನ್ನ ಒಳಗ ಕರದು,

ಅಲ್ರಿ ಆ ನಿಮ್ಮ ಗೆಳಿಯಾ ಗಡ್ಡಾ ಬಿಟ್ಟಾರಲ್ಲಾ ಅವರು ಉಳ್ಳಾಗಡ್ಡಿ ತಿನ್ತಾರೋ ಇಲ್ಲ ಮತ್ತ? ಅಂತ ಸಾವಕಾಶ ಕಿವಿಯೊಳಗ ಹೇಳೋದ್ರಾಗ ಹ,,ಹ,,ಹ,, ಅಂತ ಜೋರಾಗಿ ನಕ್ಕು ಕೇಕಿಹೊಡಕೋತ "ಅಂವಾ ಗಡ್ಡಾ ಬಿಟ್ಡಾನ ಅಷ್ಟ ಉಳ್ಳಾಗಡ್ಡಿ ಬಟ್ಟಿಲ್ಲಾ" ಅಂತ ಆ ಅತಿಥಿಗೂ ಕೇಳೋಹಂಗ ಹೇಳಿದ್ದಲ್ದ ಈ ಶೀನ್ಯಾ ಎಲ್ಲಮ್ಮನ ಗುಡ್ಡದ ಜ್ಯಾತ್ಯ್ಯಾಗ ಮಂಡಕ್ಕಿ, ಮಿಚಿ೯, ಕಾಂದಾಬಜಿ ಎಲ್ಲೆ ಛೋಲೋ ಮಾಡ್ತಾರೋ ಅದನ್ನ ಹುಡಕ್ಯಾಡಿ ನಮ್ಮನ್ನ ಕರಕೊಂಡು ಹೋಗಿದ್ದು ನೆನಪಿಲ್ಲೇನ? ಅದ ಶೀನ್ಯಾನ ಇಂವಾ ಈಗ ಗಡ್ಡಾ ಬಿಟ್ಟಿದ್ದಕ್ಕೆ ನಿನಗ ಗೊತ್ತಹತ್ತಲಿಲ್ಲ ಅಷ್ಟ ಅಂವಾ ಉಳ್ಳಾಗಡ್ಡಿ ತಿಂತಾನ ನೀ ಬೇಕಾದ್ದ ತಿಂಡಿ ಮಾಡ ಏನ.ಅಂತ ಹೇಳೊಮುಂದ ಪಾಪ ಶೀನಪ್ಪಾ ಅಲ್ರಿ ವ್ಯೆನಿಯವರ ಈ ಹುಚರಾಯ ಹೇಳೋದೆಲ್ಲಾ ಖರೇನ ಅದ ಅದರ ನಾನು ಗಡ್ಡಾ ಬಿಟ್ಟಿದ್ದಕ್ಕೆ ಕಾರಣ ಬ್ಯಾರೆನ ಅದ ಬಿಡ್ರಿ ಅಂತ ಅಡಿಗಿಮನಿಯೊಳಗಿರೊ ಮಾಮಿಗೆ ಕೇಳೋಹಂಗ ಒದರಿ ಗಡ್ಡಾಬಿಟ್ಟ ವಿಷಯಾನ ಹೇಳಿದಮ್ಯಾಲ ಮಾಮಾನ ಡ್ಯಲಾಗ ನೆನಸಿಕೊಂಡು ನಕ್ಕಿದ್ದ,....ನಕ್ಕಿದ್ದು....
B. C Bahadur Desai

Comments

Popular posts from this blog

Mahamud Gawan

ವೃತ್ತಿ –ಉದ್ದಿಮೆ- ಪತ್ರಕರ್ತ

Literature in Bidar