Recent article in Kendasampige
ಎಮ್ಮ ಚೆಲುವ ಕರುನಾಡು:ಒಂಥರಾ ಮಂಥನ ಶಿಬಿರವು ಹೃಷಿಕೇಶ್ ಬಹದ್ದೂರ್ ದೇಸಾಯಿ ಸೋಮವಾರ, 15 ನವೆಂಬರ್ 2010 (05:18 IST) (ಚಿತ್ರಗಳು:ಪ್ರಕಾಶ್ ಬಾಬು) ಅವತ್ತು ನಮ್ಮೂರು ಹಾನಗಲ್ಲಿನಲ್ಲಿ `ಕರ್ನಾಟಕ ಕುಲಪುತ್ರ ಗೂಳಿಹಟ್ಟಿ ಶೇಖರ್ ಫ್ಯಾನ್ ಕ್ಲಬ್' ಉದ್ಘಾಟನೆ. ನಾನು ಹಾಗು ನಮ್ಮ ಗೆಳೆಯರು ತುಂಬ ಗಡಿಬಿಡಿಯಲ್ಲಿ ಓಡಾಡಿಕೊಂಡು ಇದ್ದೆವು. ಕಾರ್ಯಕ್ರಮವನ್ನು ತುಂಬ ಡಿಫೆರೆಂಟ್ ಆಗಿ ಮಾಡಬೇಕು ಎಂದುಕೊಂಡಿದ್ದರಿಂದ ನಮಗೆ ತುಂಬ ಕೆಲಸಗಳು. `ಬರೀ ಭಾಷಣ ಬೇಡ, ಏನಾದರೂ ಪ್ರ್ಯಾಕ್ಟಿಕಲ್ ತರಬೇತಿ ಇಟ್ಟುಕೊಳ್ಳಿ' ಅಂತ ಜಗದ್ಗುರು ರೇಣುಕಾಚಾರ್ಯ ಅವರು ಅಪ್ಪಣೆ ಕೊಡಿಸಿದ್ದರಿಂದ ತಿಂಗಳುಗಟ್ಟಲೇ ಕಷ್ಟಪಟ್ಟು ಒಂದು ಶಿಬಿರವನ್ನೇ ಆಯೋಜಿಸಿದೆವು. ಅದಕ್ಕ ವಿವರವಾದ ವೇಳಾಪಟ್ಟಿ ತಯಾರು ಮಾಡಿದ್ದೆವು. ಶಿಬಿರ ತುಂಬ ಚೆನ್ನಾಗಿ ನಡೆಯಿತು. ಅದೊಂದು ಹೊಸ ರೀತಿಯ ಪ್ರಯೋಗ, ತುಂಬ ಇಂಟರೆಸ್ಟಿಂಗ್ ಅಂತ ಅನ್ನಿಸಿತು. ಓದುಗರಿಗೂ ಕುತೂಹಲ ಇರಬಹುದು ಅಂತ ಅನ್ನಿಸಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಬೆಳಿಗ್ಗೆ ಐದು ಗಂಟೆಗೆ ಊರ ಹೊರಗಿನ ರಿಸಾರ್ಟಿನಲ್ಲಿ ವಾಕಿಂಗ್ ಹಾಗೂ ವ್ಯಾಯಾಮ. ದಿನಾಲೂ ವಾಕಿಂಗ್ ಮಾಡದೇ ಇದ್ದರೂ ಟೀವಿ ಕ್ಯಾಮೆರಾದ ಮುಂದೆ ತೋರಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ನಿಕಟಪೂರ್ವ ಶಾಸಕರೊಬ್ಬರಿಂದ ಟ್ರೇನಿಂಗ್. ಆಮೇಲೆ ತೂಕ ಇಳಿಸಿಕೊಳ್ಳುವುದರ ಬಗ್ಗೆ ಧರಂಸಿಂಗ್ ಹಾಗೂ ನಿತಿನ್ ಗಡ್ಕರಿ ಅವರಿಂದ ಚಿಂತನ. (ಇನ್ನೇನು ಅವರು ಕಸರತ್ತು ಮಾಡಿ ತ...