Posts

Showing posts with the label BJP spoof Karnataka

Spoof on BJP government in Karnataka-1

ಕಮಲದಲ್ಲಿ ಕಮಲ ಹುಟ್ಟಿ, ಗೂಢದಲ್ಲಿ ಲೀನವಾಗಿ By ಹೃಷಿಕೇಶ್ ಬಹದ್ದೂರ್ ದೇಸಾಯಿ ಅಂದು ಮಧ್ಯಾಹ್ನ ನನ್ನ ಫೋನಿಗೆ ವಿದೇಶಿ ನಂಬರಿನಿಂದ ಫೋನ್ ಬಂತು. ಲಂಡನ್ನಿನಲ್ಲಿರುವ ನನ್ನ ಹೆಂಡತಿಯ ತಮ್ಮ ಫೋನ್ ಮಾಡಿರಬೇಕು ಅಂತ ಎತ್ತಿದೆ. ಆದರೆ ಫೋನ್ ಮಾಡಿದವರು ಬೇರೆ. ಸಹಕಾರಿ ಧುರೀಣ ಹಾಗೂ ಹಿರಿಯ ಮಿತ್ರ ಗುರುನಾಥ್ ಈಜಿಪ್ತ್ ನಿಂದ ಮಾತಾಡುತ್ತಿದ್ದರು. ಪಿರಾಮಿಡ್ಡೀಕರಣ ``ಏನ್ ನ್ಯೂಸು ಸರ್ ನಮ್ಮ ಪಾರ್ಟಿ ಏನಂತದ? ಸರಕಾರ ಇರ್ತದೋ ಇಲ್ಲೋ?'' ಎಂದರು. ``ನೀವು ಈಜಿಪ್ತ್ ನಲ್ಲಿ ಇದ್ದೀರೋ ಇಲ್ಲೋ. ಅಲ್ಲಿಯೇ ಯಾವುದಾದರೂ ಪಿರಾಮಿಡ್ ನೋಡಲಿಕ್ಕೆ ಹೋದಾಗ ಯಾವುದಾದರೂ ಪಿರಾಮಿಡ್ ಖಾಲಿ ಇದ್ದರೆ ನಿಮ್ಮ ಪಕ್ಷಕ್ಕೊಂದು ಸಮಾಧಿ ಬುಕ್ ಮಾಡಿಬಂದು ಬಿಡ್ರಿ'' ಅಂತಂದೆ. ``ಹೌದು ಹೋಗಿದ್ವಿ. ಆದರೆ ಪಿರಾಮಿಡ್ ಯಾವುದೂ ಖಾಲಿ ಇದ್ದಂಗ ಕಾಣಲಿಲ್ಲ'' ಅಂದರು. ``ಅಯ್ಯೋ ಹಂಗಾರ ಅಯೋಧ್ಯಾನೋ, ಕಾಶ್ಮೀರಾನೋ ಎಲ್ಲೋ ಒಂದು ಕಡೆ ಸಮಾಧಿ ಹುಡುಕಬೇಕಾತು'' ಅಂತ ನಕ್ಕು ಸುಮ್ಮನಾದೆವು. ಪ್ಲ್ಯಾಂಟರ್ ಗಳ ಸಮಾವೇಶ ಆ ನಂತರ ಸ್ವಲ್ಪ ಹೊತ್ತಿಗೆ ಸ್ನೇಹಿತ ಶ್ರೀರಾಮುಲು ಅವರ ಪಿಎ ಅವರ ಫೋನ್ ಬಂತು. ಸಾಹೇಬರ ಪ್ರೆಸ್ ಮೀಟ್ ಇದೆ ಸಾರ್, ಬರಬೇಕಂತೆ ಅಂದರು. ನಾನು ಹೋದರೆ ಅಲ್ಲಿ ಪತ್ರಿಕಾಗೋಷ್ಠಿ ಇಲ್ಲ. ಏನಿಲ್ಲ. ಪ್ರೆಸ್ ಮೀಟ್ ಅಂದರೆ ಸುದ್ದಿಗೋಷ್ಠಿ ಅಲ್ಲ. ಸರ್, ಪ್ರೆಸ್ ನವರನ್ನು ಮೀಟ್ ಮಾಡೋದು, ಅಷ್ಟೇ, ಅಂದರು ಸಚಿವರು. ಅವರನ್ನು ಆವಾಗಾವಾಗ ಮೀ...